ಪ್ರೀತಿ ನಾಗರಾಜ್ (ಆಂಗ್ಲ: ), ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆಯುವ ಲೇಖಕಿ, ಪತ್ರಕರ್ತೆ ಮತ್ತು ಅಂಕಣ ಬರಹಗಾರ್ತಿ. ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳುಳ್ಳ ಅವರ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಸಾರವಾದ ಅವರ ‛ಮಿರ್ಚಿ ಮಂಡಕ್ಕಿ’ ಅಂಕಣ ಬರಹಗಳು ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಪುಸ್ತಕವಾಗಿಯೂ ಪ್ರಕಟಗೊಂಡಿವೆ. == ವೃತ್ತಿ == ಬಾಲ್ಯದಿಂದಲೂ ರಂಗಭೂಮಿಯ ವಾತಾವರಣದಲ್ಲಿಯೇ ಬೆಳೆದ ಪ್ರೀತಿ, ರಂಗಚಟುವಟಿಕೆಗಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪತ್ರಕರ್ತೆಯಾಗಿ ತಮ್ಮ ವೃತ್ತಿ ಆರಂಭಿಸಿದ ಪ್ರೀತಿಯವರು ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್'ಪ್ರೆಸ್, ಮುಂತಾದ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ಪಡೆದ ಡಿಸೆಂಬರ್ 1 ಚಿತ್ರಕ್ಕೆ ಚಿತ್ರಕತೆ ಸಹಾಯಕರಾಗಿ ಕೆಲಸ ಮಾಡಿದ ಪ್ರೀತಿ, ಅದೇ ಚಿತ್ರದಲ್ಲಿ ನಟಿಸಿದ್ದಾರೆ. ರಂಗಕರ್ಮಿ, ನಟಿ ಬಿ.ಜಯಶ್ರೀ ಅವರ ಆತ್ಮಕಥೆ "ಕಣ್ಣಾಮುಚ್ಚೆ ಕಾಡೇಗೂಡೇ" ಕೃತಿಯ ನಿರೂಪಣೆ ಮಾಡಿರುವ ಪ್ರೀತಿ, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರಲ್ಲಿ ಪ್ರಮುಖರು. == ಕೃತಿಗಳು == "ಮಿರ್ಚಿ ಮಂಡಕ್ಕಿ" - ಭಾಗ ೧, ೨ "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ" ಇತ್ಯಾದಿ == ಪ್ರಶಸ್ತಿಗಳು == 2016 - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ("ಕಣ್ಣಾಮುಚ್ಚೆ ಕಾಡೇಗೂಡೇ" ಜೀವನ ಚರಿತ್ರೆಗೆ) 2010 - ಸರೋಜಿನಿ ನಾಯ್ಡು ಬಹುಮಾನ ( "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ" ಲೇಖನಕ್ಕೆ) ಇತ್ಯಾದಿ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == [೧]